ಅಲ್ಫೋನ್ಸಾ ಅವರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಐಟಂ ಹಾಡುಗಳು, ಪೋಷಕ ಮತ್ತು ಅತಿಥಿ ಪಾತ್ರಗಳಲ್ಲಿ ತಮ್ಮ ಕೆಲಸಗಳಿಗೆ ಹೆಸರುವಾಸಿಯಾದ ಭಾರತೀಯ ನಟಿ. == ವೃತ್ತಿ == ಕೆ ಎಸ್ ರವಿಕುಮಾರ್ ಅವರ ಪಂಚತಂತ್ರಂ (೨೦೦೨) ಚಿತ್ರದಲ್ಲಿ ಅಲ್ಫೋನ್ಸಾ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಕಮಲ್ ಹಾಸನ್ ಜೊತೆಗೆ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದಾರೆ. ವಿಕ್ರಮ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೊದಲು ಕಾದಲ್ ಸಡುಗುಡು (೨೦೦೩) ಚಿತ್ರದಲ್ಲಿ ಅವರ ಕೆಲಸವನ್ನು "ಅಶ್ಲೀಲ" ಎಂದು ವಿವರಿಸಲಾಗಿದೆ. == ವೈಯಕ್ತಿಕ ಜೀವನ == ಅಲ್ಫೋನ್ಸಾ ಹುಟ್ಟಿದ್ದು ತಮಿಳುನಾಡಿನಲ್ಲಿ. ಆಕೆಯ ಕಿರಿಯ ಸಹೋದರ ನೃತ್ಯ ಸಂಯೋಜಕ ರಾಬರ್ಟ್ ಅವರು ನಟರಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಫೋನ್ಸಾ ೨೦೦೧ ರಲ್ಲಿ ಪರ್ವು ಮಝೈ ಚಿತ್ರದಲ್ಲಿ ತನ್ನ ಸಹನಟ ನಜೀರ್ ಅವರನ್ನು ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು. ೨೦೧೨ ರಲ್ಲಿ ನಟ ವಿನೋದ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆಲ್ಫೋನ್ಸಾ ಅವರೊಂದಿಗೆ ಎರಡು ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ನಂತರ ಅಲ್ಫೋನ್ಸಾ ಕೂಡ ಮಾರ್ಚ್ ೨೦೧೨ ರಲ್ಲಿ ಅತಿಯಾದ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಳು ಆದರೆ ಉಳಿಸಲ್ಪಟ್ಟಳು. ವಿನೋದ್ ಸಾವಿನಲ್ಲಿ ನಟಿಯ ಕೈವಾಡದ ಬಗ್ಗೆ ಆರಂಭದಲ್ಲಿ ಶಂಕೆ ವ್ಯಕ್ತಪಡಿಸಿದ ವರದಿಗಳು ಹೊರಹೊಮ್ಮಿದವು. ಅಂತಹ ಆರೋಪಗಳು ಆಧಾರರಹಿತ ಎಂದು ಅವರು ನಂತರ ಒತ್ತಾಯಿಸಿದರು. ಮುರಳಿ ಜೊತೆಗೆ ಕವಚ ಎಂಬ ಸಿನಿಮಾದಲ್ಲಿ ವಿನೋದ್ ನಾಯಕನಾಗಿ ನಟಿಸಿದ್ದು ಆರ್ಥಿಕ ಸಮಸ್ಯೆಯಿಂದಾಗಿ ಅದನ್ನು ತಡೆಹಿಡಿಯಲಾಗಿತ್ತು ಮತ್ತು ಅರ್ಧ ದಶಕ ಕಠಿಣ ಪರಿಶ್ರಮದ ಹೊರತಾಗಿಯೂ ಚಲನಚಿತ್ರಗಳಲ್ಲಿ ನಟನಾಗಿ ನಟಿಸಲು ವಿಫಲವಾದ ಕಾರಣ ಅವರು ಖಿನ್ನತೆಗೆ ಒಳಗಾಗಿದ್ದುದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರಬಹುದೆಂದು ಆಲ್ಫೋನ್ಸಾ ಹೇಳಿಕೆ ನೀಡಿದ್ದರು. == ಚಿತ್ರಕಥೆ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ [೧]